ಶೀಘ್ರದಲ್ಲೇ ಹರಿಹರ-ಕೊಟ್ಟೂರು ಮೂಲಕ ಬೆಂಗಳೂರು ರೈಲು ಸಂಚಾರ
By Gururaj S
Updated: Sun, Feb 10, 2019, 12:59 [IST]
ಬಳ್ಳಾರಿ, ಫೆಬ್ರವರಿ 10 : ಹೊಸಪೇಟೆ-ಬೆಂಗಳೂರು ರೈಲು ಹರಿಹರ-ಕೊಟ್ಟೂರು ಮೂಲಕ ಸಂಚಾರ ನಡೆಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಈ ಮಾರ್ಗದಲ್ಲಿ ಕೇವಲ ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿದ್ದವು.
ಕೊಟ್ಟೂರು...
more... ನಾಗರೀಕ ಕ್ರಿಯಾ ಸಮಿತಿ ಕಾರ್ಯದರ್ಶಿ ಮದನ್ ಶಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಹೊಸಪೇಟೆ-ಬೆಂಗಳೂರು ರೈಲು ಹರಿಹರ-ಕೊಟ್ಟೂರು ಮಾರ್ಗವಾಗಿ ಮಾರ್ಚ್ 31ರಿಂದ ಸಂಚಾರ ನಡೆಸಲಿದೆ ಎಂದು ಹೇಳಿದ್ದಾರೆ.
ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಫೆ.15ರಂದು ಮೋದಿಯಿಂದ ಹಸಿರು ನಿಶಾನೆ
ಸಮಿತಿಯ ಸದಸ್ಯರು ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಎ.ಕೆ.ಸಿನ್ಹಾ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ ಹರಿಹರ-ಕೊಟ್ಟೂರು ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದರು.
ಶಿವಮೊಗ್ಗ-ಬೆಂಗಳೂರು ನಡುವೆ ಜನ ಶತಾಬ್ದಿ ರೈಲು ಸಂಚಾರ ಫೆ.3ರಿಂದ ಆರಂಭ
Hosapete-Harihar train from March 31
ಸುಮಾರು 600 ಕೋಟಿ ವೆಚ್ಚದಲ್ಲಿ ರೈಲು ಮಾರ್ಗ ನಿರ್ಮಾಣವಾಗಿದ್ದರೂ ಕೇವಲ ಗೂಡ್ಸ್ ರೈಲುಗಳು ಸಂಚಾರ ನಡೆಸುತ್ತಿವೆ. ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾದರೆ ಜನರಿಗೆ ಉಪಯೋಗವಾಗಲಿದೆ ಎಂದು ಮನವಿ ಸಲ್ಲಿಸಲಾಗಿತ್ತು.
ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್ಪ್ರೆಸ್ ರೈಲು
ಕೊಟ್ಟೂರು-ಹರಿಹರ ಮಾರ್ಗದಿಂದ ಹೈದರಾಬಾದ್ ಕರ್ನಾಟಕ ಭಾಗದ ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ, ಹರಿಹರ, ದಾವಣಗೆರೆ ಭಾಗದ ಜನರ ಬಹುದಿನ ಕನಸಾಗಿತ್ತು. 1995ರಲ್ಲಿ ಹರಿಹರ-ಕೊಟ್ಟೂರು ರೈಲ್ವೆ ಮಾರ್ಗದ ಕಾಮಗಾರಿ ಬೇಗ ಮುಗಿಸಲು ಮನವಿ ಮಾಡಲಾಗಿತ್ತು.